Kannada Rajyotsava 2016

“ಎಲ್ಲೇ ಇರು, ಹೇಗೆ ಇರು. ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ”

ಎಂ. ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 14, 15 ಹಾಗೂ 16ರಂದು ಭರ್ಜರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅದರಲ್ಲಿ ಬುಧುವಾರ ಅಂದರೆ 16ನೇ ತಾರೀಖು, ಮುಖ್ಯ ಕಾರ್ಯಕ್ರಮ ಅಯೂಜಿಸಲಾಗಿತು. ಬುಧುವರ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಯ ಹಾಗೆ ಮುಖ್ಯ ಅತಿಥಿಗಳು ಆಗಮಿಸಿದರು. ಅವರಿಗೆ ವೀರಗಾಸೆ ಪ್ರದರ್ಶನದ ಮೂಲಕ ಸ್ವಾಗತಕೊಡಲಾಯಿತು. ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ನಡೆಸಲಾಯಿತು. ಧ್ವಜರೋಹಣದ ವೇಳೆ ನಮ್ಮ ನಾಡಗೀತೆಯನ್ನು ಕೇಳಿ ಎಲ್ಲರಲ್ಲೂ ನಾಡಪ್ರೇಮ ಹೆಚ್ಚಾಯಿತು. ಇದಾದನಂಥರ,ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ,ದೀಪವನ್ನು ಬೆಳಗಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಿ. ಸಿದ್ದರಾಮಯ್ಯ, ಕನ್ನಡ ಸಾಹಿತಿಗಳು ಹಾಗು ಮುಂಬರುವ ಚಿತ್ರ ‘ಬದ್ಮಾಶ್’ನ ನಟ ಧನಂಜಯ್, ನಟಿ ಸಂಚಿತ ಶೆಟ್ಟಿ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಆಗಮಿಸಿದ್ದರು. ಕಾರ್ಯಕ್ರಮವು ಪ್ರಾರ್ಥನೆಯಿಂದ ಶುರುವಾಯಿತು. ಮುಖ್ಯಾತಿಥಿಗಳ ಸ್ವಾಗತಿಸಿ, ಅವರ ಪರಿಚಯದ ನಂತರ ಸನ್ಮಾನಿಸಲಾಯಿತು. ಇದಾದನಂಥರ, ಮುಖ್ಯಾತಿಥಿಗಳಾದ ಪಿ. ಸಿದ್ದರಾಮಯ್ಯನವರು ಪ್ರೇಕ್ಷಕರ ಕುರಿತು ಭಾಷಣ ಮಾಡಿದರು. ಅವರ ಭಾಷಣದಲ್ಲಿ ಮುಖ್ಯವಾದ ಅಂಶಗಳು, ಕನ್ನಡದ ಸಂಸ್ಕೃತಿಯನ್ನು ರಕ್ಷಿಸುವುದಾಗಿ, ಕರ್ನಾಟಕ ಹಾಗು ತಮಿಳು ನಾಡಿನ ಮದ್ಯೆ ಕಾವೇರಿ ನೀರಿನ ಹಂಚಿಕೆಯ ಗೊಂದಲ, ಕರ್ನಾಟಕಕ್ಕೆ ಸಿಕ್ಕ ಮಲತಾಯಿ ಧೋರಣೆ, ರೈತರ ಕಷ್ಟಗಳ ಬಗ್ಗೆ ಇದ್ದವು. ಇವರ ನಂತರ ನಟ ಧನಂಜಯ್ನವರು ಕೂಡ ವೀಕ್ಷಕರನ್ನು ಉದ್ಧೇಶಿಸಿ ಮಾತಾಡಿದರು. ಅವರು ಕೂಡ ಇಂಜಿನಿಯರಿಂಗ್ ಪದವಿದರಾಗಿದ್ದು, ಅವರ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು ಹಾಗು ಅವರ ಮುಂಬರುವ ಚಲನಚಿತ್ರವಾದ “ಬದ್ಮಾಶ್” ಚಿತ್ರದಬಗ್ಗೆ ಹೇಳಿದರು. ಹೇಗೆ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಹಾಗು ನಟಿ ಸಂಚಿತ ಶೆಟ್ಟಿ ಕೂಡ ಒಂದ್ ಎರಡು ಮಾತಾಡಿದರು. ಕೊನೆಗೆ ನಮ್ಮ ಪ್ರಾಂಶುಪಾಲರು ಕೂಡ ವಿದ್ಯಾರ್ಥಿಗಳಲ್ಲನ್ನು ಉದ್ಧೇಶಿಸಿ ಮಾತಾಡಿದರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದದ್ದು ಕನ್ನಡ ಬಾರದ ಇಬ್ಬರು ವಿದ್ಯಾರ್ಥಿಗಳು ಕನ್ನಡದಲ್ಲಿ ಭಾಷಣ ಮಾಡಿದರು ಹಾಗು ಕನ್ನಡ ಚಿತ್ರಗೀತೆಯನ್ನು ಹಾಡಿದರು. ಮುಂದಿನ ಭಾಗವಾಗಿ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳಾದ ಧನಂಜಯ್, ಆಕಾಶ್ ಶ್ರೀವತ್ಸ ಹಾಗು ಸಂಚಿತ ಶೆಟ್ಟಿಯವರು ಬಹುಮಾನವನ್ನು ವಿತರಿಸಿದರು.

ಮುಖ್ಯ ಅತಿಥಿಗಳ ನಿರ್ಗಮನದ ನಂತರ, ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಎಂ. ಎಸ್. ಆರ್. ಐ. ಟಿ ಯಾ ಶಿಕ್ಷಕರು, ವಿದ್ಯಾರ್ಥಿ ವೃಂದಾದವರು ಎಲ್ಲರೂ ಇದರಲ್ಲಿ ಭಾಗಿಯಾದರು. ಮೊದಲನೆಯ ಪ್ರದರ್ಶನ, ಸಂಗೀತ ತಂಡವು ತಮ್ಮ ಮಧುರವಾದ ಸಂಗೀತದಿಂದ ಎಲ್ಲರನ್ನು ಮನೂರಂಜಿಸಿದರು. ಇದಾದನಂಥರ, ಶಿಕ್ಷಕರು ಅವರ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರನ್ನು ಬೆರಗಾಗಿಸಿದರು. ನೃತ್ಯ ತಂಡಗಳು ಕೂಡ ತಮ್ಮ ರಮಣೀಯವಾದ ನೃತ್ಯದಿಂದ ಎಲ್ಲರನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಮನೂರಂಜಿಸಿತು. ಇದರ ಮದ್ಯೆ ವಿದ್ಯಾರ್ಥಿಗಳು ‘ಬೀಟ್ ಬಾಕ್ಸಿಂಗ್’ ಮಾಡಿ ಎಲ್ಲರನ್ನು ಹರ್ಷಿಸಿದರು. ಎಲ್ಲ ಪ್ರದರ್ಶನದ ನಂತರ ತಮಟೆ ಭರಿಸಿ, ಅದಕ್ಕೆ ಎಲ್ಲರೂ ಕೂಡ ಉತ್ಸಾಹದಿಂದ ಮನಬಂದ ಹಾಗೆ ನೃತ್ಯ ಮಾಡಿದರು. ಈ ನೃತ್ಯವು, 2016 ಸಾಲಿನ ಕನ್ನಡ ರಾಜ್ಯೋತ್ಸವದ ಕೊನೆಯ ಹಂತವಾಯಿತು.

ಎಲ್ಲರ ಸಹಕಾರದಿಂದ, ಈ ವರ್ಷದ ಕನ್ನಡ ರಾಜ್ಯೋತ್ಸವ ಅತೀ ವಿಜೃಂಭಣೆಯಿಂದ, ಯಶಸ್ವಿಯಾಗಿ ಮುಕ್ತಯವಾಯುತು. ಎಲ್ಲರ ಮುಖದಲ್ಲಿ ಹರುಷ ಹಾಗು ಸಂತೋಷ ತುಂಬಿತ್ತು.

ಜೈ ಕರ್ನಾಟಕ ಮಾತೇ!

 

Anagha M (1st year, Mechanical engineering )

Illustration by Mirudula.M (2nd year, Bitechnology )

This article was written by 19a

Leave a Reply

Your email address will not be published. Required fields are marked *